ಹಾಸ್ಯದ ಮೂಲಕ ಸಮಾಜದ ಅಂಕು-ಡೊಂಕು ತಿದ್ದಿದ ಗೋಗೇರೆಗೋಗೇರಿ ಬರೆದ ‘ಚುನಾವಣೆಗೆ ನಿಂತ ನಮ್ಮ ಕಡೆಮನಿ ಹನಮಂತ’ ಎಂಬ ಕವನವು ನಾಡಿನಾದ್ಯಂತ ಸಾಹಿತ್ಯಾಸಕ್ತರ ಮನೆ-ಮನದಲ್ಲಿ ಇನ್ನೂ ಜೀವಂತವಾಗಿದೆ. ಮಾನವೀಯ ಮೌಲ್ಯಗಳಾದ ಸರ್ವಧರ್ಮ ಸಮಾನತೆ, ಸೌಹಾರ್ದತೆ, ಸರ್ವರ ಹಿತರಕ್ಷಣೆ, ಪರೋಪಕಾರ, ನಿರಾಡಂಬರತೆ ಮುಂತಾದ ಜೀವನ ಮೌಲ್ಯಗಳನ್ನು ಜನಮಾನಸದಲ್ಲಿ ತಮ್ಮ ಸಾಹಿತ್ಯದ ಮೂಲಕ ಬಿತ್ತಿದರು.