ಧಾರವಾಡ ಜಿಲ್ಲೆಯ ಗ್ರಾಮೀಣದಲ್ಲಿ ತೆರಿಗೆ ವಸೂಲಿಗೆ ಜಿಪಂ ವಿಶೇಷ ಅಭಿಯಾನ!ಗ್ರಾಮೀಣ ಪ್ರದೇಶದಲ್ಲಿ ಒತ್ತಾಯ ಪೂರ್ವಕ ತೆರಿಗೆ ಸಂಗ್ರಹ ನಿರೀಕ್ಷಿಸುವಂತಿಲ್ಲ. ಏನಿದ್ದರೂ ಅವರ ಮನವೊಲಿಸಿಯೇ ತೆರಿಗೆ ಸಂಗ್ರಹ ಮಾಡಬೇಕು. ಇಲ್ಲವೇ, ರಹವಾಸಿ ಪ್ರಮಾಣ ಪತ್ರ, ಮನೆ ಪರವಾನಗಿ ಅಂತಹ ಕೆಲಸ, ಕಾರ್ಯಗಳಲ್ಲಿ ಅನಿವಾರ್ಯವಾಗಿ ತೆರಿಗೆ ತುಂಬುತ್ತಾರೆ. ಇಲ್ಲದೇ ಹೋದಲ್ಲಿ ಹಲವಾರು ವರ್ಷಗಳ ಕಾಲ ತೆರಿಗೆ ತುಂಬುವುದಿಲ್ಲ.