ಡಾ. ಚಂದ್ರಶೇಖರ ಕಂಬಾರ, ತಳವಾರ, ಬುಜುರ್ಕೆಗೆ ಕವಿವಿ ಅರಿವೇ ಗುರು ಪ್ರಶಸ್ತಿಕರ್ನಾಟಕ ವಿಶ್ವವಿದ್ಯಾಲಯವು ಕಳೆದ ಎರಡು ವರ್ಷಗಳಿಂದ ಕೊಡಮಾಡುತ್ತಿರುವ ‘ಅರಿವೇ ಗುರು’ ಪ್ರಶಸ್ತಿ 2024ನೇ ಸಾಲಿಗೆ ಕಲಾ ಕ್ಷೇತ್ರದಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಸಮಾಜ ವಿಜ್ಞಾನ ಕ್ಷೇತ್ರದಿಂದ ಡಾ. ವಿ.ಜಿ. ತಳವಾರ ಹಾಗೂ ವಿಜ್ಞಾನ ಕ್ಷೇತ್ರದಿಂದ ಕವಿವಿ ಎಮರಿಟೀಸ್ ಪ್ರಾಧ್ಯಾಪಕ, ಗಣಿತ ವಿಜ್ಞಾನಿ ಪ್ರೊ. ಎನ್.ಎಂ. ಬುಜುರ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.