ವರುಣದೇವ ಮುನಿಸು, ತಾಯಂದಿರಿಂದ ಮೌನವ್ರತಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದ ಅನ್ನದಾತನಿಗೆ ಮಳೆ ನಿರಾಸೆ ಮೂಡಿಸಿದೆ. ಕಳೆದ ಒಂದು ತಿಂಗಳಿಂದ ಒಂದೇ ಒಂದು ಉತ್ತಮ ಮಳೆಯಾಗದೇ ಇರುವ ಹಿನ್ನೆಲೆಯಲ್ಲಿ ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದ್ದು, ವರುಣನ ಮುನಿಸು ತಪ್ಪಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಪೂಜಾ ವಿಧಾನಗಳನ್ನು ಅನುಸರಿಸಲು ಮುಂದಾಗಿದ್ದು, ಅದರಲ್ಲಿ ಸ್ಥಳೀಯ ಹಿರೇಮಠದ ಓಣಿಯ ತಾಯಂದಿರು ಸತತ ಐದು ದಿನಗಳ ಕಾಲ ನಸುಕಿನ ವೇಳೆ ಮೌನವ್ರತಾಚರಣೆ ಮಾಡುವ ಮೂಲಕ ವರುಣ ದೇವನಿಗೆ ಪ್ರಾರ್ಥಿಸುತ್ತಿದ್ದಾರೆ.