ದರ ಕುಸಿತಕ್ಕೆ ಬೇಸತ್ತು ಈರುಳ್ಳಿ ಹರಗಿದ ಲಕ್ಕುಂಡಿ ಗ್ರಾಮದ ರೈತ! ಉಳುಮೆ, ಬೀಜ, ಗೊಬ್ಬರ, ಔಷಧಿ, ಆಳು ಸೇರಿದಂತೆ ₹75 ಸಾವಿರ ಖರ್ಚು ಮಾಡಿರುವ ರೈತ ದರ ಕುಸಿತದಿಂದ ಬೆಳೆದ ಫಸಲನ್ನು ಹರಗಿದ್ದಾರೆ. ಮಾರುಕಟ್ಟೆಯಲ್ಲಿ ಸದ್ಯ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹200- ₹300 ಮಾತ್ರ ಇದ್ದು, ದರ ಕುಸಿತದಿಂದ ಈರುಳ್ಳಿ ಬೆಳೆದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.