ಈರುಳ್ಳಿ ಬೆಳೆಹಾನಿ ಪರಿಹಾರ ನೀಡಲು ಆಗ್ರಹ1 ಎಕರೆಗೆ ರೈತರು ಬಿತ್ತನೆಗೆ ಬೀಜ, ಔಷಧಿ, ಕಸ ತೆಗೆಯುವುದು ಸೇರಿ ಮಾರುಕಟ್ಟೆಗೆ ಹೋಗುವ ವರೆಗೆ ₹30ರಿಂದ ₹40 ಸಾವಿರ ಖರ್ಚು ಮಾಡುತ್ತಾರೆ. ಆದರೆ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ಮಾಡಿದ ಖರ್ಚೂ ವಾಪಸ್ ಬಾರದಂತಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.