ಶೇ. 100 ಸಮೀಕ್ಷೆ ಪೂರ್ಣಗೊಳಿಸಿದ ಗದಗ ಜಿಲ್ಲೆ!ಪ್ರತಿ ಮನೆಗೆ ಯುಎಚ್ಐಡಿ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ಹೆಸ್ಕಾಂ ಸಿಬ್ಬಂದಿಗೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಬೀಗ ಹಾಕಿದ್ದ ಮತ್ತು ಖಾಲಿ ಇದ್ದ ಮನೆಗಳಿಗೂ ಸ್ಟಿಕ್ಕರ್ ಅಂಟಿಸಲಾಗಿದ್ದು, ಇದರಿಂದ ದತ್ತಾಂಶದಲ್ಲಿ ಕೆಲವು ನ್ಯೂನತೆಗಳು ಉಂಟಾಗಿದ್ದವು. ಜಿಲ್ಲಾಡಳಿತವು ಈ ನ್ಯೂನತೆಗಳನ್ನು ತ್ವರಿತವಾಗಿ ಸರಿಪಡಿಸಿ, ಬುಧವಾರ ಸಂಜೆ ವೇಳೆಗೆ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ.