ಪಾಲಿಟೆಕ್ನಿಕ್ ಕಾಲೇಜ್ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ, ಸಾರ್ವಜನಿಕರ ಆಕ್ರೋಶರೋಣ ತಾಲೂಕಿನ ಗ್ರಾಮೀಣ ಬಡ ಮಕ್ಕಳಿಗೆ ಉನ್ನತ ತಾಂತ್ರಿಕ ಶಿಕ್ಷಣ ಲಭಿಸಲಿ ಎಂಬ ಸದುದ್ದೇಶದಿಂದ ಪಟ್ಟಣದ ಸಮೀಪ ಕುರಹಟ್ಟಿ ಒಳ ರಸ್ತೆಯಲ್ಲಿ ನಿರ್ಮಿಸಲಾದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ನೂತನ ಕಟ್ಟಡವು ಉದ್ಘಾಟನೆಗೂ ಮುನ್ನ ಅನೈತಿಕ ಚಟುವಟಿಕೆ ತಾಣವಾಗಿದೆ ಎಂದು ಪಟ್ಟಣದ ಜನತೆ ಶುಕ್ರವಾರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಕಟ್ಟಡ ಎದುರು ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು.