ಸಂವಿಧಾನ ಕಗ್ಗೊಲೆ ಮಾಡಿದ ಅಪಕೀರ್ತಿ ಇಂದಿರಾಗೆ ಸಲ್ಲುತ್ತದೆ: ಶಾಸಕ ಸಿ.ಸಿ. ಪಾಟೀಲಲೋಕಸಭೆ ಚುನಾವಣೆಯಲ್ಲಿ ಹಣ ಮತ್ತು ಪ್ರಭಾವದ ಮೇಲೆ ಗೆದ್ದಿದ್ದು ಅಲಹಾಬಾದ ಉಚ್ಛ ನ್ಯಾಯಾಲಯದಲ್ಲಿ ಸಾಬೀತಾಗಿ ಅವರ ಸಂಸತ್ಸದಸ್ಯ ಸ್ಥಾನ ಅನೂರ್ಜಿತಗೊಳಿಸಿದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸರ್ವಾಧಿಕಾರಿಯಾಗಿ ವರ್ತಿಸಿ ಸಂವಿಧಾನದ 38ನೇ ವಿಧಿಗೆ ತಿದ್ದುಪಡಿ ತಂದು ದೇಶದ ಮೇಲೆ ಕರಾಳ ತುರ್ತು ಪರಿಸ್ಥಿತಿ ಹೇರಿ, ಸಂವಿಧಾನ ಕಗ್ಗೊಲೆ ಮಾಡಿದ ಅಪಕೀರ್ತಿಗೆ ಭಾಜನರಾಗಿದ್ದರು ಎಂದು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ. ಪಾಟೀಲ ಹೇಳಿದರು.