ನಗರ ಪ್ರದೇಶದಲ್ಲಿ ಅರಣ್ಯ ಹೆಚ್ಚಿಸಲು ಹೊಸ ಮಾದರಿ: ಅಹಮದ್ ಹಗರೆನಗರದ ಪ್ರದೇಶದಲ್ಲಿ ದಟ್ಟವಾಗಿ ಬೆಳೆಸಲು ಕಡಿಮೆ ಅವಧಿಯಲ್ಲಿ ಬರುವ ಕಾಡು ಬೆಳೆಸುವುದಾಗಿದೆ. ಇದು ರಾಜ್ಯಾದ್ಯಂತ ಹಾಗೂ ದೇಶದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಹೇಳಿದರು. ಹಾಸನದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯಕ್ರಮದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.