ಹಾಸನದ ಜಯನಗರ ಬಡಾವಣೆಯಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣಕ್ಕೆ ತಯಾರಿ ಆರಂಭಹಾಸನದ ಜಯನಗರ ಬಡಾವಣೆಯಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭಗೊಂಡಿತು. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸುಮಾರು 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಬಡಾವಣೆಯ ಪುಟಾಣಿಗಳಾದ ಮೋನಾಕ್ಷಿ, ರಂಜನ್, ಪಾಂಚಜನ್ಯ, ನೇಸರ ಹಾಗೂ ಶುಭ ಗಿಡ ನೆಡುವುದರ ಮೂಲಕ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭವಾಯಿತು.