ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಿ: ಪ್ರಾಂಶುಪಾಲ ಮಹೇಶ್ ಕರೆಸರಳ ಜೀವನ ಉನ್ನತ ಚಿಂತನೆ ಮಹಾತ್ಮ ಗಾಂಧೀಜಿ ಅವರ ಧ್ಯೇಯವಾಗಿದ್ದು, ಅದನ್ನು ಕೇವಲ ಬೋಧಿಸದೆ ಜೀವಮಾನವಿಡೀ ಪಾಲಿಸಿದರು. ತತ್ವರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ಶೀಲವಿಲ್ಲದ ಶಿಕ್ಷಣ, ನೀತಿ ಹೀನ ವ್ಯಾಪಾರ, ಮಾನವತೆ ಇಲ್ಲದ ವಿಜ್ಞಾನ, ತ್ಯಾಗ ಇಲ್ಲದ ಪೂಜೆ, ಆತ್ಮಸಾಕ್ಷಿ ಇಲ್ಲದ ಭೋಗ ಇವು ಏಳು ಮಹಾ ಪಾಪಗಳು ಎಂಬುದು ಗಾಂಧೀಜಿ ವಿಚಾರವಾಗಿತ್ತು.