• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಳ್ಳಿಗಳಲ್ಲೂ ಗುಣಮಟ್ಟದ ರಸ್ತೆಗಳು ಆಗಬೇಕು ಶಾಸಕ ಶಿವಲಿಂಗೇಗೌಡ
ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸಿ ಸಂಚಾರ ಸುಗಮವಾಗಿಸಲು ಈ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಹಾಗೂ ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು. ಕೇವಲ ನಗರ, ಪಟ್ಟಣ ಪ್ರದೇಶಗಳ ಜನರಿಗೆ ಮಾತ್ರವಲ್ಲದೆ ಹಳ್ಳಿಗಾಡಿನ ಜನರಿಗೂ ಗುಣಮಟ್ಟದ ರಸ್ತೆ ಬಳಕೆಗೆ ಸಿಗಬೇಕು ಹಾಗೂ ಇದರಿಂದ ಅಪಾರ ಮಂದಿಗೆ ಅನುಕೂಲ ಆಗಬೇಕು ಎಂಬ ಹಿತದೃಷ್ಟಿಯಿಂದ ರಸ್ತೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಉಪಚುನಾವಣೆ ಗೆಲುವು ಸಂಭ್ರಮಿಸಿದ ಕಾಂಗ್ರೆಸ್‌
ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದ ಮುಂದೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆ ನಡೆಸಿದರು. ಸುಳ್ಳು, ಅಪಪ್ರಚಾರ, ಕುಟುಂಬ ರಾಜಕಾರಣಕ್ಕೆ ಮತ್ತು ಉದ್ದೇಶ ಪೂರ್ವಕವಾಗಿ ಟೀಕೆ ಟಿಪ್ಪಣಿ ಮಾಡಿರುವ ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರಿಗೆ ಸ್ಪಷ್ಟ ಸಂದೇಶವನ್ನು ಮತದಾರರು ಕೊಟ್ಟಿದ್ದಾರೆ. ಈ ಮೂರು ಕ್ಷೇತ್ರಗಳ ಜನರಿಗೆ ಮತ್ತೊಮ್ಮೆ ಧನ್ಯವಾದಗಳನ್ನು ಹೇಳುವುದಾಗಿ ತಿಳಿಸಿದರು.
ಜೆಡಿಎಸ್ ತವರಲ್ಲಿ ಡಿಸೆಂಬರ್‌ 5ಕ್ಕೆ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ
ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಜೆಡಿಎಸ್‌ಗೆ ತಿರುಗೇಟು ನೀಡುವ ಹಿನ್ನೆಲೆಯಲ್ಲಿ ಜೆಡಿಎಸ್‌ ತವರಲ್ಲೇ ಸಿದ್ದರಾಮಯ್ಯ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದರ ಸಿದ್ಧತೆ ಈಗಾಗಲೇ ಶುರುವಾಗಿದ್ದು, ಶನಿವಾರ ನಗರದಲ್ಲಿ ನಾಲ್ವರು ಸಚಿವರು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೆ ಪೂರ್ವಸಿದ್ಧತಾ ಸಭೆ ನಡೆಸಿದ್ದಾರೆ. ಡಿಸೆಂಬರ್‌ 5ರಂದು ನಗರದಲ್ಲಿ ಸಿದ್ಧರಾಮಯ್ಯ ಸ್ವಾಭಿಮಾನಿ ಸಂಘದಿಂದ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ.
ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಿಗಳಿಂದ ಶಾಸಕ ಸ್ವರೂಪ್‌ಗೆ ಮನವಿ
ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಕಟ್ಟಿನಕೆರೆ ಮಾರುಕಟ್ಟೆ ವ್ಯಾಪಾರಿಗಳ ಒಕ್ಕೂಟದ ವತಿಯಿಂದ ಎಚ್.ಪಿ. ಸ್ವರೂಪ್ ಪ್ರಕಾಶ್ ಹಾಗೂ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಅವರಿಗೆ ನಗರಸಭೆ ಆವರಣದಲ್ಲೇ ಮನವಿ ಸಲ್ಲಿಸಿದರು. ನಗರಸಭೆ ವತಿಯಿಂದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳಿಗೆ ಅತಿ ಶೀಘ್ರವಾಗಿ ವರ್ತಕರ ಹೆಸರು ನೋಂದಾಯಿಸಿ ಬಾಡಿಗೆಗೆ ನೀಡಬೇಕು. ಹಾಗೂ ಮಹಾವೀರ ವೃತ್ತದಲ್ಲಿ ಅನಧಿಕೃತವಾಗಿ ರಸ್ತೆ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಕೋರಿದರು.
ಎಸ್‌ಎಸ್‌ಎಂನಲ್ಲಿ ಭಾರತ್‌ ಕ್ಯಾನ್ಸರ್‌ ಒಪಿಡಿ ಆರಂಭ
ಭಾರತ್ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯು (ಬಿಎಚ್‌ಐಒ) ನಗರದ ಎಸ್‌ಎಸ್‌ಎಮ್ ಸ್ಪೆಷಾಲಿಟಿ ಕ್ಲಿನಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಹೊರರೋಗಿಗಳ ಆಸ್ಪತ್ರೆಯನ್ನು (ಒಪಿಡಿ) ಯನ್ನು ಪ್ರಾರಂಭಿಸಲಾಗಿದೆ ಎಂದು ಮೈಸೂರಿನ ಭಾರತ್ ಕ್ಯಾನ್ಸರ್‌ ಆಸ್ಪತ್ರೆಯ ಕನ್ಸಲೆಂಟ್ ರೇಡಿಯೇಶನ್ ಅಂಕೊಲಾಜಿಸ್ಟ್ ಡಾ. ವಿನಯಕುಮಾರ್ ಮುತ್ತಗಿ ತಿಳಿಸಿದರು. ಕೆ.ಆರ್‌.ಪುರಂನಲ್ಲಿರುವ ಎಸ್‌ಎಸ್‌ಎಮ್ ಸ್ಪೆಷಾಲಿಟಿ ಕ್ಲಿನಿಕ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ಸಂಸ್ಥೆಯಲ್ಲಿ ತಿಂಗಳ ಪ್ರತಿ ಮೊದಲ ಮತ್ತು ಮೂರನೇ ಬುಧವಾರ ಬೆಳಿಗ್ಗೆ ೧೦.೩೦ರಿಂದ ಮಧ್ಯಾಹ್ನ ೨.೩೦ರವರೆಗೆ ಈ ಬಿಎಚ್‌ಐಇ ಒಪಿಡಿ ಸೌಲಭ್ಯವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗಿದೆ ಎಂದರು.
ಗ್ರಂಥಾಲಯದ ಪುಸ್ತಕಗಳನ್ನು ಸದುಪಯೋಗಪಡಿಸಿಕೊಳ್ಳಿ
ಗ್ರಂಥಾಲಯದಲ್ಲಿರುವ ಪುಸ್ತಕಗಳ ಸದುಪಯೋಗಪಡಿಸಿಕೊಳ್ಳುವಂತೆ ಪುರಸಭೆ ಅಧ್ಯಕ್ಷ ಬನಶಂಕರಿ ರಘು ಕರೆ ನೀಡಿದ್ದಾರೆ. ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹೇಮವಾಣಿ ಪ್ರಕಾಶನ, ಹೇಮಾವತಿ ಆಫ್‌ಸೆಟ್ ಪ್ರಿಂಟರ್ಸ್ ವತಿಯಿಂದ ನಡೆದ ಗ್ರಂಥಾಲಯ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಉನ್ನತ ಹುದ್ದೆಗಳನ್ನು ಯುವಕರು ಹಿಡಿಯುವಲ್ಲಿ ಗ್ರಂಥಾಲಯ ಸಹಕಾರಿಯಾಗಿದೆ. ಜ್ಞಾನದ ದೇಗುಲ ಗ್ರಂಥಾಲಯ ಎಂದರು.
ಇಂಗ್ಲೀಷ್ ವ್ಯಾಮೋಹ ಬಿಟ್ಟು ಕನ್ನಡ ಕಟ್ಟುವ ಕೆಲಸವಾಗಲಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವಂಪು ಕನ್ನಡ ವೇದಿಕೆಯ ವತಿಯಿಂದ ವಿನೂತನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಅತಿಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕಾರ್ಯಕ್ರಮಕ್ಕೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ಇಂಗ್ಲೀಷ್‌ನ ವ್ಯಾಮೋಹಕ್ಕೆ ಒಳಗಾಗದೆ ಮಾತೃಭಾಷೆಯಾದ ಕನ್ನಡವನ್ನು ಕಟ್ಟುವ ಕೆಲಸ ಮಾಡಬೇಕೆಂದು ಹೇಳಿದರು.
ಮಾದಕ ವಸ್ತುವಿನ ನಿಯಂತ್ರಣ ಅರಿವು
ಮಾದಕ ವಸ್ತುವಿನ ನಿಯಂತ್ರಣ ಹಾಗೂ ಅರಿವು ಮೂಡಿಸುವ ಒಂದು ದಿನದ ಕಾರ್ಯಾಗಾರವನ್ನು ಕೆಎಸ್‌ಆರ್‌ಟಿಸಿ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿತ್ತು. ಬಸ್ಸಿನಲ್ಲಿ ಪ್ರಯಾಣಿಸುವ 40ರಿಂದ 50 ಜನರ ಪ್ರಾಣವೂ ಒಬ್ಬ ಬಸ್ಸಿನ ಚಾಲಕ ಮತ್ತು ನಿರ್ವಾಹಕರ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ಇವರು ಸಮಯ ಪ್ರಜ್ಞೆ, ಯಾವುದೇ ದುಶ್ಚಟಗಳಿಗೆ ದಾಸರಾಗದೆ ತಮ್ಮ ಕೆಲಸವನ್ನು ಜವಾಬ್ದಾರಿಯಿಂದ, ಕಾರ್ಯನಿಷ್ಠೆಯಿಂದ ನಿರ್ವಹಿಸಬೇಕೆಂದು ಸಭೆಯಲ್ಲಿ ನೆರೆದಿದ್ದ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಮೆದುಳು ಜ್ವರ ಹದಿನೈದು ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ
ಮೆದುಳು ಜ್ವರ ಮಾರಕ ರೋಗವಾಗಿದ್ದು ಇದು 15 ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಕಾಡುತ್ತದೆ, ಈ ಕುರಿತು ಮುನ್ನೆಚ್ಚರಿಕೆ ಆಗತ್ಯ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಜಿಲ್ಲಾ ಅಧಿಕಾರಿ ಡಾ. ನಾಗಪ್ಪ ತಿಳಿಸಿದರು. ಮೆದುಳು ಜ್ವರದ ವೈರಾಣುಗಳನ್ನು ಹೊಂದಿದ ಹಂದಿ ಮತ್ತು ಬೆಳ್ಳಕ್ಕಿಯನ್ನು ಕಚ್ಚಿದ ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತದೆ ಎಂದರು. ಮೆದುಳು ಜ್ವರ ಹರಡುವ ವಿಧಾನ, ಇದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮ, ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
ಅಧರ್ಮಗಳಿಗೆ ಸೋಲು ಖಂಡಿತ ಎಂದ ಬಾಳೆಹೊನ್ನೂರು ಶ್ರೀ
ಗುರುವಿನ ಮಾರ್ಗದರ್ಶನ ಅನುಸರಿಸಿ ಸಂಸ್ಕಾರವಂತರಾಗಿ ಧರ್ಮಾಚರಣೆ ಅನುಸರಣೆಯಿಂದ ಮಾನವನಿಗೆ ಶಾಂತಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಯಾರೂ ಅಧರ್ಮ ಮಾರ್ಗದಲ್ಲಿ ನಡೆಯಬಾರದು. ಅಧರ್ಮಗಳಿಗೆ ಸೋಲು ಖಂಡಿತ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಬಸವಾಪಟ್ಟಣ ಗ್ರಾಮದ ವೀರಶೈವ ಸಮಾಜದ ತೊಟ್ಟಿಮನೆ ವಂಶಸ್ಥರ ವತಿಯಿಂದ ನೂತನವಾಗಿ ನಿರ್ಮಿಸಿದ ಶ್ರೀಗಂಗಾಧರೇಶ್ವರ ನೂತನ ದೇವಾಲಯ ಉದ್ಘಾಟನೆ ಮತ್ತು ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿ ನಂತರ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
  • < previous
  • 1
  • ...
  • 281
  • 282
  • 283
  • 284
  • 285
  • 286
  • 287
  • 288
  • 289
  • ...
  • 555
  • next >
Top Stories
ಡಿಎನ್‌ಎ ಪರೀಕ್ಷೆ ವರದಿ ಈಗ ಒಂದು ತಿಂಗಳಲ್ಲೇ ಲಭ್ಯ
ಕನ್ನಡ ಹೋರಾಟಗಾರರ ಹತ್ತಿಕ್ಕಲು ಕೇಸ್‌ ಅಸ್ತ್ರ
ಆರ್‌ಎಸ್‌ಎಸ್‌ ಮಾತ್ರವೇ ಅಲ್ಲ, ಹಿಂದು ಧರ್ಮವೂ ನೋಂದಣಿ ಆಗಿಲ್ಲ: ಭಾಗ್ವತ್‌
ಕಾರ್‍ಯಕ್ರಮಕ್ಕೆ ತಡವಾಗಿದ್ದಕ್ಕೆ ರಾಹುಲ್‌ಗೆ 10 ಪುಷಪ್‌ ಶಿಕ್ಷೆ!
ರಾಜ್ಯದ ಎತ್ತಿನಹೊಳೆ, ಶರಾವತಿ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್‌
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved