ರಾಜು ಕಾರ್ಯ ಹೊಸ ಪೀಳಿಗೆಗೆ ಆದರ್ಶ: ಶಾಸಕ ಸಿ.ಎನ್.ಬಾಲಕೃಷ್ಝರಾಜುರವರು ಅತ್ಯುತ್ತಮವಾದ ಮೂರು ಕೃತಿಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಈ ಸಮಾಜಕ್ಕೆ ಹಾಗೂ ಹೊಸ ಪೀಳಿಗೆಗೆ ಆದರ್ಶ ಪ್ರಾಯರಾಗಿದ್ದಾರೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು. ಚನ್ನರಾಯಪಟ್ಟಣದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತ ಎ.ಜಿ.ರಾಜು ರವರ ಮೂರು ಕಾದಂಬರಿಗಳಾದ ‘ಗುಬ್ಬಚ್ಚಿ ಗೂಡು’, ‘ಮೋಕ್ಷಗಾಮಿ’, ‘ನಗುವಿನ ಒಡತಿ’ ಎಂಬ ಪುಸ್ತಕಗಳನ್ನು ಲೋಕರ್ಪಣೆ ಮಾಡಿ ಮಾತನಾಡಿದರು.