ಸಂಸದ ಶ್ರೇಯಸ್‌ರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಸಾಧ್ಯಜಿಲ್ಲೆಯಲ್ಲಿ ಕಾಂಗ್ರೆಸ್ ಸದೃಢಗೊಳಿಸಲು ಶ್ರೇಯಸ್ ಪಟೇಲ್ ಒಂದು ಶಕ್ತಿಯಾಗಿದ್ದಾರೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಸಿ. ಜಿ. ರವಿ ಹಾಗೂ ರಕ್ಷಾ ಕಮಿಟಿ ಸದಸ್ಯ ಶಂಕರ್ ಬರಗೂರು ತಿಳಿಸಿದರು. ಶ್ರೇಯಸ್ ಅವರು ಸರಳ ಹಾಗೂ ಸುಸಂಸ್ಕೃತ ಯುವಕರು. ಜಿಲ್ಲೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಬಡವರು, ದೀನದಲಿತರು, ರೈತರ ಪರವಾಗಿ ಕೆಲಸ ಮಾಡುತ್ತಿದ್ದು, ಇಂತಹ ಯುವ ನಾಯಕರನ್ನು ಪಡೆದ ನಾವೇ ಪುಣ್ಯವಂತರು ಎಂದು ಹೊಗಳಿದರು.