ಯಾತ್ರಾ ಕ್ಷೇತ್ರವಾಗಿ ಆಂಜನೇಯ ಸ್ಥಳ ಅಭಿವೃದ್ಧಿ: ಶಾಸಕ ಸಿಮೆಂಟ್ ಮಂಜುಆಲೂರು ತಾಲೂಕಿನ ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೈರಾಪುರ, ಸೊಪ್ಪಿನಹಳ್ಳಿ, ಮಣಿಪುರ ಗ್ರಾಮಸ್ಥರ ಸಹಯೋಗದಲ್ಲಿ ದಾನಿಗಳು ಹಾಗೂ ಸರ್ಕಾರದ ಅನುದಾನದಿಂದ ರಾಷ್ಟ್ರೀಯ ಹೆದ್ದಾರಿ ೭೫ ರ ಪಕ್ಕದ ದೇವರಕೆರೆಯಲ್ಲಿ ನಿರ್ಮಿಸಿರುವ ೧೮ ಅಡಿ ಎತ್ತರದ ಶ್ರೀ ವಿಜಯ ಆಂಜನೇಯಸ್ವಾಮಿ ಭವ್ಯ ಮೂರ್ತಿಗೆ ಶಾಸಕ ಸಿಮೆಂಟ್ ಮಂಜು ಪೂಜೆ ನೆರವೇರಿಸಿದರು.