• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಕ್ಫ್‌ ಅಧಿಕಾರ ಮೊಟಕುಗೊಳಿಸಲು ಆಗ್ರಹ
ದೇವಸ್ಥಾನ ಮತ್ತು ಮಠಮಾನ್ಯಗಳ ಮೇಲೆ ವಕ್ಫ್‌ ನೀಡಿರುವ ನೋಟಿಸ್‌ ಅನ್ನು ಕೂಡಲೇ ಹಿಂಪಡೆದು, ರೈತರ ಪಹಣಿಗಳಲ್ಲಿ ನಮೂದಾಗಿರುವ ವಕ್ಫ್ ಆಸ್ತಿ ಎಂಬುದನ್ನು ರದ್ದುಗೊಳಿಸಬೇಕು. ವಕ್ಫ್‌ಗೆ ನೀಡಿರುವ ಈ ಅಧಿಕಾರದ ಆದೇಶವನ್ನೇ ಹಿಂಪಡೆಯಬೇಕೆಂದು ಆಗ್ರಹಿಸಿ ಕನ್ನಡಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಡಿಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಕಬ್ಬಳಿ ಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವ
ಹಿರಿಸಾವೆ ಹೋಬಳಿಯ ಕಬ್ಬಳಿ ಬಸವೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕಾರ್ತಿಕ ಸೋಮವಾರದ ರಾತ್ರಿ ಸರ್ಪೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಮತ್ತು ಕಲ್ಯಾಣಿಯಲ್ಲಿ ತೆಪ್ಪೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮುತ್ತಿನ ಪಲ್ಲಕ್ಕಿಯ ಮೆರವಣಿಗೆಯೂ ಮಂಗಳವಾದ್ಯ, ಮಹಿಳಾ ವೀರಗಾಸೆ, ಡೊಳ್ಳು ಕುಣಿತ, ಕೋಲಾಟ, ಚಂಡವಾದ್ಯ ಸೇರಿದಂತೆ ವಿವಿಧ ಕಲಾ ತಂಡಗಳೊಂದಿಗೆ ನಡೆಯಿತು.
ಹೊಳೆನರಸೀಪುರದಲ್ಲಿ ವಾಹನ ಪಾರ್ಕಿಂಗ್‌
ಪಟ್ಟಣದ ಡಾ. ಅಂಬೇಡ್ಕರ್‌ ವೃತ್ತ, ಶ್ರೀ ಜಯಚಾಮರಾಜೇಂದ್ರ ಒಡೆಯರ್‌ ವೃತ್ತ ಹಾಗೂ ಸಾರ್ವಜನಿಕ ಆಸ್ಪತ್ರೆ ರಸ್ತೆಯ ಬದಿಗಳು ಪೊಲೀಸ್ ಇಲಾಖೆ ಅಳವಡಿಸಿದ ಸಿಸಿ ಕ್ಯಾಮರಾಗಳ ಕಣ್ಗಾವಲಿನಲ್ಲಿದ್ದು, ಇವುಗಳ ಕಣ್ಗಾವಲಿಗೆ ಪೊಲೀಸ್ ಠಾಣೆಯಲ್ಲಿ ಟಿವಿ ಅಳವಡಿಸಲಾಗಿದೆ. ಆದ್ದರಿಂದ ಪರ ಊರುಗಳಿಗೆ ಕರ್ತವ್ಯಕ್ಕೆ ತೆರಳುವ ನೌಕರರು ತಮ್ಮ ವಾಹನಗಳನ್ನು ಬಹಳ ಬುದ್ಧಿವಂತಿಕೆಯಿಂದ ಸಿಸಿ ಕ್ಯಾಮರಾ ಕಣ್ಗಾವಲು ಇರುವ ಸ್ಥಳಗಳಲ್ಲಿ ನಿಲ್ಲಿಸಿ ತೆರಳುತ್ತಾರೆ. ಈ ಕಾರಣದಿಂದ ನಾಗರಿಕರಿಗೆ ತೊಂದರೆ ಉಲ್ಪಣಿಸಿದೆ.
ಕಾಡಾನೆ ಹಾವಳಿಗೆ ಅಪಾರ ಬೆಳೆ ನಷ್ಟ
ಕಟಾವಿಗೆ ಬಂದ ಮುಸುಕಿನ ಜೋಳ, ಭತ್ತದ ಗದ್ದೆ, ತೆಂಗು ಬೆಳೆಗಳು ಆನೆ ದಾಳಿಗೆ ತುತ್ತಾಗಿದೆ. ನಾಗರತ್ನ ಅವರಿಗೆ ಸೇರಿದ ೨೦ ತೆಂಗಿನ ಮರದ ಜೊತೆ ಜೋಳದ ಬೆಳೆ ತುಳಿದು ನಾಶಪಡಿಸಿದೆ. ಯೋಗೇಶ್ ಎಂಬುವವರ ಒಂದೂವರೆ ಎಕರೆಯಷ್ಟು ಮುಸುಕಿನ ಜೋಳ ಹಾಡುಗೆಡವಿದೆ. ಚಂದ್ರಶೇಖರ್‌ ಅವರ ಎರಡು ಎಕರೆ ಜೋಳ, ದೇವರಾಜ್ ಅವರಿಗೆ ಸೇರಿದ ಗುಡ್ಡೆಹಾಕಿದ್ದ ಜೋಳದ ಮೇತೆಯನ್ನು ತಿಂದು ಹಾಕಿವೆ. ಮಲ್ಲೇಶ್‌ ಎಂಬುವರ ೬ ವರ್ಷದ ೧೨ ತೆಂಗಿನ ಮರವನ್ನು ಬುಡ ಸಹಿತ ಕಿತ್ತುಹಾಕಿವೆ.
ಬೀದಿನಾಟಕಗಳ ಮೂಲಕ ಜನಜಾಗೃತಿ
ದೇಶದಲ್ಲಿ ಅನೇಕ ಮಹಾನ್ ಪುರುಷರು ಜನ್ಮ ತಾಳಿ ಜಾತೀ ಎಂಬ ಭೂತವನ್ನು ತೊಡೆದು ಹಾಕಲು ಪ್ರಯತ್ನ ಪಟ್ಟರೂ ಇಂದಿಗೂ ಜಾತಿ ವ್ಯವಸ್ಥೆ ನಮ್ಮಲ್ಲಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಮ್ಮಲ್ಲಿ ಮೂಡಬೇಕಿದೆ ಆಗ ಮಾತ್ರ ನಾವು ಸುಭದ್ರವಾದಂತಹ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಅಸ್ಪೃಶ್ಯತಾ ನಿವಾರಣೆ ಅಭಿಯಾನವನ್ನು ಹಳ್ಳಿಹಳ್ಳಿಯಲ್ಲಿ ಹಮ್ಮಿಕೊಂಡಿದೆ.
5 ಗ್ಯಾರಂಟಿಗಳು ಯೋಗೇಶ್ವರ್ ಗೆಲುವಿಗೆ ಸಹಕಾರಿ: ಗ್ಯಾರಂಟಿ ಯೋಜನಾ ಸಮಿತಿಯ ಪ್ರಕಾಶ್ ಗೌಡ
ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತವಾಗಿದೆ. ಗ್ಯಾರಂಟಿ ಯೋಜನೆಗಳು ಅವರ ಕೈಯಡಿಯಲ್ಲಿವೆ ಎಂದು ಚನ್ನರಾಯಪಟ್ಟಣ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಎಲ್‌.ಪಿ.ಪ್ರಕಾಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು. ನುಗ್ಗೇಹಳ್ಳಿಯಲ್ಲಿ ಪ್ರಚಾರ ವೇಳೆ ಮಾತನಾಡಿದರು.
ನವೆಂಬರ್‌ 18ರಂದು ತಂಬಾಕು ಮಾರುಕಟ್ಟೆ ಬಂದ್‌ ಮಾಡಿ ರೈತರ ಪ್ರತಿಭಟನೆ
ಗುಣಮಟ್ಟದ ತಂಬಾಕಿಗೆ ಉತ್ತಮ ದರ ದೊರೆಯುತ್ತಿಲ್ಲ ಹಾಗೂ ಕೆಳ ದರ್ಜೆಯ ತಂಬಾಕು ಖರೀದಿ ನಡೆಸುತ್ತಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನ.18 ರಂದು ತಂಬಾಕು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಎಸ್.ವಿ.ಯೋಗಣ್ಣ ಎಚ್ಚರಿಸಿದರು. ಅರಕಲಗೂಡಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಜ್ಯೋತಿ ರಥದಿಂದ ಕನ್ನಡ ಸಂಸ್ಕೃತಿ ಅರಿವು: ತಹಸೀಲ್ದಾರ್‌ ಕೃಷ್ಣಮೂರ್ತಿ
ಕನ್ನಡ ನಾಡು, ನುಡಿ, ನೆಲ, ಜಲ, ಕನ್ನಡಾಭಿಮಾನ ಹಾಗೂ ಸಂಸ್ಕೃತಿಯ ಹಿರಿಮೆಯನ್ನು ಕಾಪಾಡುತ್ತ, ವಿಸ್ತಾರವಾಗಿ ಪಸರಿಸುವ ಜತೆಗೆ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಕನ್ನಡಜ್ಯೋತಿ ರಥವು ರಾಜ್ಯದಲ್ಲಿ ಸಂಚರಿಸುತ್ತಿದೆ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಹೇಳಿದರು. ಹೊಳೆನರಸೀಪುರಕ್ಕೆ ಆಗಮಿಸಿದ ಕನ್ನಡಜ್ಯೋತಿ ರಥಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಹೈದರಾಲಿಯಿಂದ ಕೋಟೆ ರಕ್ಷಿಸಿದ ವೀರ ಮಹಿಳೆ ಓಬವ್ವ: ತಹಸಿಲ್ದಾರ್ ನಂದಕುಮಾರ್
ಚಿತ್ರದುರ್ಗದ ಕೋಟೆಯನ್ನು ಹೈದರಾಲಿಯ ದಾಳಿಯಿಂದ ತಪ್ಪಿಸಿದ ವೀರ ವನಿತೆ ಒನಕೆ ಓಬವ್ವ ಅವಳ ಸಾಹಸ ಮತ್ತು ಶೌರ್ಯದಿಂದ ಚಿತ್ರದುರ್ಗದ ಕೋಟೆ ಹೈದರಾಳಿಯ ಕೈ ವಶವಾಗುವುದನ್ನ ತಪ್ಪಿಸಿದರು ಎಂದು ತಹಸಿಲ್ದಾರ್ ಸಿ.ಪಿ.ನಂದಕುಮಾರ್ ತಿಳಿಸಿದರು. ಆಲೂರಿನಲ್ಲಿ ಓಬವ್ವ ಜಯಂತಿಯಲ್ಲಿ ಮಾತನಾಡಿದರು.
ನವೆಂಬರ್‌ 29ರಿಂದ ಡಿಸೆಂಬರ್‌ 4ರ ವರೆಗೆ ಹಳೆಬೀಡಿನಲ್ಲಿ ಪಂಚಕಲ್ಯಾಣ ಉತ್ಸವ: ವೀರ ಸಾಗರ ಮುನಿ ಮಹಾರಾಜರು
ಪ್ರಸಕ್ತ ವರ್ಷದ ನ.೨೯ ರಿಂದ ಡಿ.೪ರ ವರೆಗೆ ೩೧ ಅಡಿ ಎತ್ತರದ ಭಗವಾನ್ ಶ್ರೀ ೧೦೦೮ ಮುನಿಸುವ್ರತ ತೀರ್ಥಂಕರ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ ಬೃಹತ್ ಪಂಚಕಲ್ಯಾಣ ಪ್ರತಿಷ್ಠಾಪನಾ ಮಹೋತ್ಸವ ಜರಗಲಿದೆ ಎಂದು ವೀರ ಸಾಗರ ಮುನಿ ಮಹಾರಾಜರು ಹೇಳಿದರು. ಹಳೆಬೀಡು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
  • < previous
  • 1
  • ...
  • 290
  • 291
  • 292
  • 293
  • 294
  • 295
  • 296
  • 297
  • 298
  • ...
  • 555
  • next >
Top Stories
ಕಾರ್‍ಯಕ್ರಮಕ್ಕೆ ತಡವಾಗಿದ್ದಕ್ಕೆ ರಾಹುಲ್‌ಗೆ 10 ಪುಷಪ್‌ ಶಿಕ್ಷೆ!
ಆಡ್ವಾಣಿ ಉದಾಹರಿಸಿ ನೆಹರೂ, ಇಂದಿರಾಗೆ ತರೂರ್‌ ಟಾಂಗ್‌
ಸಲಿಂಗಿ ಸಂಗಾತಿಗಾಗಿ 5 ತಿಂಗ್ಳ ಶಿಶುವನ್ನು ಕೊಂದ ನೀಚ ತಾಯಿ!
ಕೆಮಿಕಲ್‌ ಬಾಂಬ್‌ ಉಗ್ರರ ಬಂಧನ - ದಾಳಿ ಸಂಚು ರೂಪಿಸಿದ್ದ 3 ಉಗ್ರರು
ಆಗಸದಲ್ಲಿ ಸಿಂದೂರದ ವರ್ಣ ಬಿಡಿಸಿ ವಾಯು ಪಡೆ ಯೋಧರಿಗೆ ಗೌರವ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved