ಶ್ರೀಪ್ರಸನ್ನ ಗಣಪತಿ 82ನೇ ವರ್ಷದ ವಿಸರ್ಜನಾ ಮಹೋತ್ಸವ ಅರಸೀಕೆರೆ ಶ್ರೀಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವಕ್ಕೆ ಶುಕ್ರವಾರ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಂದ ವಿದ್ಯುಕ್ತ ಚಾಲನೆಯನ್ನು ನೀಡಿದರು. ಈ ಮೆರವಣಿಗೆಯಲ್ಲಿ ಕೀಲು ಕುದುರೆ ನರ್ತನ, ಡೊಳ್ಳು ಕುಣಿತ, ವೀರಭದ್ರ ದೇವರ ಕುಣಿತ, ಭದ್ರಕಾಳಿ ಕುಣಿತ, ರಾಣಿಬೆನ್ನೂರು ರೋಡ್ ಆರ್ಕೆಸ್ಟ್ರಾ ಸೇರಿದಂತೆ ಸುಮಾರು ೩೦ಕ್ಕೂ ಹೆಚ್ಚಿನ ಜಾನಪದ ಕಲಾ ತಂಡಗಳು ಅದ್ಧೂರಿ ಮೆರವಣಿಗೆಯಲ್ಲಿ ಪಾಲ್ಗೊಂಡು ನಾಗರಿಕರಿಗೆ ಮನರಂಜನೆ ನೀಡಿದವು.