ಅರಣ್ಯ ಇಲಾಖೆಯನ್ನೇ ಏಮಾರಿಸುತ್ತಿರುವ ಚಿರತೆಚಿರತೆ ಸೆರೆಗೆ ಅತಿಯಾದ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕೂಡಗು ಹಾಗೂ ಜಿಲ್ಲೆಯ ಇತರೆ ತಾಲೂಕುಗಳಿಂದ ಆರು ಪಂಜರ ಹಾಗೂ ೭ ಸಿಸಿ ಕ್ಯಾಮರಗಳನ್ನು ತಂದು ಮಾವಿನಹಳ್ಳಿ ಗ್ರಾಮದಲ್ಲಿ ಅಳವಡಿಸಿ ಸೆರೆಗಾಗಿ ಕಾಯಲಾಗುತಿತ್ತು. ಆದರೆ, ಚಿರತೆ ಗ್ರಾಮಗಳನ್ನು ಪ್ರತಿದಿನ ಬದಲಿಸಿದಂತೆ ಪಂಜರ ಹಾಗೂ ಸಿಸಿ ಕ್ಯಾಮರಗಳನ್ನು ಬದಲಿಸುವ ಕೆಲಸ ಮಾಡುವ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ. ಅರಣ್ಯ ಇಲಾಖೆ ಸದ್ಯ ದಬ್ಬೆಗದ್ದೆ, ಹೆನ್ನಲಿ, ಅಗಲಹಟ್ಟಿ ಸೇರಿದಂತೆ ಹಲವೆಡೆ ಪಂಜರ ಹಾಗೂ ಸಿಸಿ ಕ್ಯಾಮರ ಅಳವಡಿಸಿದೆ. ಆದರೆ, ಪಂಜರದ ಸನಿಹಕ್ಕೂ ಬಾರದ ಚಿರತೆಯ ಜಾಣ ನಡೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಲೆನೋವಾಗಿದೆ.