ಹಾನಗಲ್ಲ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿಹಾನಗಲ್ಲ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಆ. ೨೭ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಬಹುಮತ ಹೊಂದಿದ್ದು, ಉಪಾಧ್ಯಕ್ಷ ಸ್ಥಾನ ವೀಣಾ ಗುಡಿ ಅವರಿಗೆ ಖಚಿತವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಪುರುಷರೋ, ಮಹಿಳೆಯರೋ ಎಂಬ ಚರ್ಚೆ ನಡುವೆ ಮಮತಾ ಆರೆಗೊಪ್ಪ, ರಾಧಿಕಾ ದೇಶಪಾಂಡೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಒತ್ತಡ ಹೆಚ್ಚಿದರೆ ಇರುವ ೧೨ ತಿಂಗಳ ಅವಧಿಯನ್ನು ಎರಡು ಅವಧಿ ಮಾಡುವ ಅನಿವಾರ್ಯತೆಯತ್ತ ಹೈಕಮಾಂಡ್ ಯೋಚಿಸುತ್ತಿದೆ.