ಸಮಾಜ ಎಷ್ಟೇ ಮುಂದುವರಿದರೂ ಜಾತಿ-ಧರ್ಮಗಳ ಸಂಘರ್ಷಗಳಿಂದ ರಕ್ಷಿಸಿಕೊಳ್ಳಲು ಆಗುತ್ತಿಲ್ಲಪ್ರಸ್ತುತ ಸಮಾಜ ಎಷ್ಟೇ ಮುಂದುವರಿದರೂ ಜಾತಿ-ಧರ್ಮಗಳ ಸಂಘರ್ಷಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತನಗರಿವಿಲ್ಲದಂತೆ ಸಮಾಜ ವಿಘಟನೆಯತ್ತ ಸಾಗುತ್ತಿದ್ದು, ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ. ದಾರ್ಶನಿಕರ ಚಿಂತನೆಗಳನ್ನು ಭವಿಷ್ಯತ್ತಿನ ದಿನಗಳಿಗೆ ಕೊಂಡೊಯ್ಯುವ ಕೆಲಸ ಅನಿವಾರ್ಯವಾಗಿ ಮಾಡಬೇಕಾಗಿದೆ ಎಂದು ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದಶ್ರೀ ಅಭಿಪ್ರಾಯ ವ್ಯಕ್ತಪಡಿಸಿದರು.