ಪ್ರಾಣಿ ಪಕ್ಷಿಗಳಿಗಾಗಿ ಕೆರೆಗೆ ಕೊಳವೆಬಾವಿ ನೀರು ಹರಿಸಿದ ರೈತಬರವೋ ಬರ, ಬರಿ ಬಿಸಿಲಿನ ಅಬ್ಬರ, ನೀರಿಲ್ಲ ಎಂಬ ಕೂಗು, ಊರೂರ ತುಂಬ ಬಾಯಾರಿಕೆ ಸುದ್ದಿ, ಆದರೆ ಪ್ರಾಣಿ ಪಕ್ಷಿಗಳ ಬಾಯಾರಿಕೆ ನೀಗಿಸಲು ಬಂದವರೇ ನಿಜವಾದ ಸಹೃದಯಿಗಳು, ಅಂತಹ ಸಹೃದಯಿ ಹಾನಗಲ್ಲ ತಾಲೂಕಿನ ಪಂಡಿತ ಪಂಚಾಕ್ಷರಿ ಗವಾಯಿಗಳವರ ಜನ್ಮ ಭೂಮಿ ಕಾಡಶೆಟ್ಟಿಹಳ್ಳಿಯ ರೈತ ಸಂಗಪ್ಪ ಸಣ್ಣಮನಿ ತಮ್ಮ ಹೊಲದ ಕೊಳವೆಬಾವಿಯ ನೀರನ್ನು ಪ್ರಾಣಿ ಪಕ್ಷಿಗಳಿಗಾಗಿ ಕೆರೆಗೆ ಹರಿಸಿ ಹರುಷಪಟ್ಟಿದ್ದಾರೆ.