ಮತದಾರರು ಅವಕಾಶ ಕಲ್ಪಿಸಿದರೆ ಹಾವೇರಿ ಕ್ಷೇತ್ರದ ವಿಕಾಸಕ್ಕೆ ಶ್ರಮಿಸುವೆ-ಆನಂದಸ್ವಾಮಿಕ್ಷೇತ್ರದ ಕಾಂಗ್ರೆಸ್ ಶಾಸಕರು, ಮುಖಂಡರು, ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳನ್ನು ಅರಿತಿದ್ದೇನೆ. ಅವಕಾಶ ನೀಡಿದರೆ ಖಂಡಿತವಾಗಿಯೂ ಕ್ಷೇತ್ರದ ವಿಕಾಸಕ್ಕೆ ಶ್ರಮಿಸುವೆ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡೇದೇವರಮಠ ಹೇಳಿದರು.