ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ-ಶಾಸಕ ಮಾನೆ ಟೀಕೆಭ್ರಷ್ಟರೆಲ್ಲರೂ ಬಿಜೆಪಿ ಸೇರಿ ಬಿಟ್ಟರೆ ಅವರು ಮಾಡಿದ ಪಾಪ, ಕರ್ಮಗಳೆಲ್ಲವೂ ಕರಗಿ ಹೋಗಿ ಗಂಗಾಸ್ನಾನ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆಯೇ? ತನಿಖಾ ಸಂಸ್ಥೆಗಳನ್ನೆಲ್ಲ ತನ್ನ ಸ್ವಾರ್ಥಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿ ವಿರೋಧ ಪಕ್ಷದ ನಾಯಕರಿಗೆ ಕಿರುಕುಳ ನೀಡಿ, ಶಕ್ತಿ ಕುಂದಿಸಲೆತ್ನಿಸುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಶಾಸಕ ಶ್ರೀನಿವಾಸ ಮಾನೆ ವಾಗ್ದಾಳಿ ನಡೆಸಿದರು.