ಹೈನುಗಾರಿಕೆ ಉದ್ಯಮವಾದಲ್ಲಿ ಉತ್ತಮ ಲಾಭ ಸಾಧ್ಯ-ಪಟಗಾರಕೃಷಿ ಆಧಾರಿತ ನಮ್ಮ ನಾಡಿನಲ್ಲಿ ಹೈನುಗಾರಿಕೆಯೂ ಒಂದು ಉದ್ಯಮವಾಗಿ ಪ್ರಗತಿ ಕಂಡಲ್ಲಿ ರೈತರಿಗೆ ಉಪ ಉದ್ಯೋಗವಾಗಿ ಲಾಭ ತರಲು ಸಾಧ್ಯವಿದ್ದು, ಬದಲಾದ ಕಾಲಕ್ಕೆ ಉತ್ತಮ ತರಬೇತಿ ಪಡೆದು ಉತ್ತಮ ಹಾಲು ಉತ್ಪಾದನೆಗೆ ಮುಂದಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ ತಿಳಿಸಿದರು.