ಸಂಸ್ಕಾರಯುತ ಭಾರತಕ್ಕಾಗಿ ಮಾರ್ಗದರ್ಶನದ ಅಗತ್ಯವಿದೆ-ಡಾ. ಕೆ. ಗಣಪತಿ ಭಟ್ಸಂಸ್ಕಾರಯುತ ಭಾರತಕ್ಕಾಗಿ ಮಕ್ಕಳು ಮಾತ್ರವಲ್ಲ, ಹಿರಿಯರಿಗೂ ಕೂಡ ಈಗ ಒಳ್ಳೆಯ ಮಾರ್ಗದರ್ಶನದ ಅಗತ್ಯವಿದೆ. ಕುಟುಂಬದ ಹಿತಕ್ಕಾಗಿ ಒಂದಷ್ಟು ಕಾಲ ಮೀಸಲಿಡುವ ಪರಿಪಾಠ ಪ್ರತಿ ಮನೆಯದ್ದಾಗಬೇಕು ಎಂದು ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ನಾದಮಯ ಸಂಸ್ಕಾರ ಶಿಬಿರದ ಸಂಚಾಲಕ ಡಾ. ಕೆ. ಗಣಪತಿ ಭಟ್ ಕರೆ ನೀಡಿದರು.