ಸಂವಿಧಾನವೇ ಕಾನೂನುಗಳ ಮೂಲ ಗ್ರಂಥ: ಲಾಡಖಾನ್ಸಂವಿಧಾನವೇ ಕಾನೂನುಗಳ ಮೂಲ ಗ್ರಂಥವಾಗಿದ್ದು, ಇದರ ಮೂಲಕವೇ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಕೆಲಸ ಮಾಡಬೇಕು ಎಂದು ಹೇಳಿದೆ. ಅದರ ಪ್ರಕಾರವೇ ಎಲ್ಲರೂ ಕರ್ತವ್ಯ ಸಲ್ಲಿಸುತ್ತಿದ್ದಾರೆ ಎಂದು ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶೆ ವೈ.ಎಲ್. ಲಾಡಖಾನ್ ಹೇಳಿದರು. ರಾಣಿಬೆನ್ನೂರಿನಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.