ಶ್ರೀರಾಮ ಶೋಭಾಯಾತ್ರೆಗೆ ಪೊಲೀಸ್ ಅಡ್ಡಿಶಹಬಾದ ನಗರದ ಬಾಲಾಜಿ ಮಂದಿರ ಹಾಗೂ ಮಾರ್ವಾಡಿ ಸಮಾಜದ ವತಿಯಿಂದ ನಗರದಲ್ಲಿ ಶ್ರೀರಾಮ ವೇಷಧಾರಿಗಳ ಮೆರವಣಿಗೆ ಆಯೋಜಿಸಲಾಗಿತ್ತು, ಅದಕ್ಕಾಗಿ ಡಿಜೆ, ರಥದ ವ್ಯವಸ್ಥೆ, ಮಹಾರಾಷ್ಟ್ರ ಬಾರ್ಸಿಯಿಂದ ಬಾಲಕರ ವಿಶೇಷ ತಾಳ ಮೇಳದ ತಂಡವನ್ನು ಕರೆಸಲಾಗಿತ್ತು. ಅದರೆ, ತಹಸೀಲ್ದಾರ ಸುದರ್ಶನ ಚೌರ, ಪಿಐ ನಟರಾಜ ಲಾಡೆ ಅವರು ಮೆರವಣಿಗೆಗೆ ಎಸ್ಪಿ ಅವರಿಂದ ಪರವಾನಿಗೆ ಪಡೆಯಬೇಕಾಗುತ್ತದೆ ಎಂದು ಮೆರವಣಿಗೆಗೆ ತಡೆದರು.