ಚಿಂಚೋಳಿ ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿಚಿಂಚೋಳಿ ತಾಲೂಕು ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಲಿಂಗಾಯತ ಸಮುದಾಯದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ಪಾಟೀಲ, ಚಿತ್ರಶೇಖರ ಪಾಟೀಲ, ಶ್ರೀಹರಿ ಕಾಟಾಪೂರ, ತಾಲೂಕು ಕೋಲಿ ಸಮಾಜದ ಮುಖಂಡ ನಾರಾಯಣ ನಾಟೀಕಾರ, ದಲಿತ ಮುಖಂಡ ಅಮರನಾಥ ಲೊಡನೋರ, ಬಿಜೆಪಿ ಯುವ ಮುಖಂಡ ಗಿರಿರಾಜ ನಾಟೀಕಾರ, ರಮೇಶ ಪಡಶೆಟ್ಟಿ ಅಧ್ಯಕ್ಷ ಗಾದಿಗೇರಲು ಇನ್ನಿಲ್ಲದ ಕಸರತ್ತು ಆರಂಭಿಸಿದ್ದಾರೆ.