ಕಲಬುರಗಿ: ನಮ್ಮ ಪರಂಪರೆ ಮೆರೆಸುವ ಕಾಲ ಬಂದಿದೆನಮ್ಮ ಕೆಲವು ತಪ್ಪುಗಳಿಂದಾಗಿ, ಪಾಶ್ಚಾತ್ಯದ ಪ್ರಭಾವಕ್ಕೆ ಒಳಗಾಗಿ ಕೆಲವು ಕಪ್ಪುಚುಕ್ಕೆ ಬಂದಿವೆ. ಅವುಗಳನ್ನು ಅಳಿಸಿ ಪುನಃ ನಮ್ಮ ಪರಂಪರೆ ಮೆರೆಸುವ ಕಾಲ ಬಂದಿದೆ. ಹಿಂದಿನ ಸಂಪ್ರದಾಯ ಮರೆಯದೇ ಆಚರಿಸುವ ಮೂಲಕ ಹಳೆ ಬೇರಿಗೆ ಈಗಿನ ಮಕ್ಕಳು ಹೊಸ ಚಿಗುರಾಗಿ ಸಂಸ್ಕೃತಿ, ಪರಂಪರೆ ಮುಂದುವರೆಸಿಕೊಂಡು ಹೋಗಬೇಕೆಂದು ನೀಲೂರ ಶಿವಶರಣೆ ನಿಂಬೆಕ್ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಲೋಣಿ ಹೇಳಿದರು.