ಆಳಂದ: ಕನ್ನಡ ರಥಯಾತ್ರೆ ಸಂಭ್ರಮಆಳಂದ ತಾಲೂಕಿಗೆ ಗುರುವಾರ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಗೆ ತಾಲೂಕು ಆಡಳಿತ ಪರ ತಹಸೀಲ್ದಾರ್ ಯಲ್ಲಪ್ಪ ಸುಬೇದಾರ ನೇತೃತ್ವದಲ್ಲಿ ಶಾಲಾ ಮಕ್ಕಳು, ಕನ್ನಡಪರ ಸಂಘಟನೆಗಳ ಮುಖಂಡರು ಸೇರಿದಂತೆ ನಾಗರಿಕರು ಕನ್ನಡ ಕಲಾವಿದರ ನೃತ್ಯ, ಡೊಳ್ಳು ಕುಣಿತ, ಕನ್ನಡ ಗೀತೆಗಳಿಗೆ ಹೆಜ್ಜೆಹಾಕುತ್ತಾ ಅದ್ಧೂರಿಯಾಗಿ ಬರಮಾಡಿಕೊಂಡು ಬೀಳ್ಕೊಟ್ಟರು.