೩೨ ಗ್ರಾಮಕ್ಕೆ ರಸ್ತೆ ಸಂಪರ್ಕ ಕಲ್ಪಿಸಲು ₹30 ಕೋಟಿ ಅನುದಾನ: ಡಾ.ಶರಣಪ್ರಕಾಶ ಪಾಟೀಲಸೇಡಂ ಮತಕ್ಷೇತ್ರದಲ್ಲಿ ಬರುವ ೩೨ಹಳ್ಳಿಗಳಲ್ಲಿ ವಿವಿಧ ಕಾಮಗಾರಿಗಳ ಪ್ರಗತಿ ನಡೆಯುತ್ತಿವೆ. ಕೊಡಂಪಳ್ಳಿ, ಕೆರೋಳಿ, ನಿಡಗುಂದಾ, ಹಲಕೋಡಾ, ಪೋತಂಗಲ, ಜಟ್ಟೂರ್, ಗಡಿಕೇಶ್ವರ, ಹೊಡೆಬೀರನಳ್ಳಿ ಮುಖ್ಯರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುತ್ತಿದೆ ಎಂದು ಚಿಂಚೋಳಿಯ ಸುಲೇಪೇಟ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಡಿಗಲ್ಲು ನೆರವೇರಿಸಿದರು.