ಭೂಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿ ರದ್ದು ಆಗ್ರಹಿಸಿ ಪ್ರತಿಭಟನೆಕೊಡಗು ಜಿಲ್ಲೆ ಭೂ ಗುತ್ತಿಗೆ ವಿರೋಧಿ ಐಕ್ಯ ಹೋರಾಟ ಸಮಿತಿ, ದಲಿತ, ಆದಿವಾಸಿ, ಕೃಷಿ, ಕಾರ್ಮಿಕ, ಮೂಲನಿವಾಸಿ ಸಂಘಟನೆಗಳ ಜಂಟಿ ವೇದಿಕೆ ವತಿಯಿಂದ ಶಿರಸ್ತೇದಾರ್ ಸುಶೀಲ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ಸರ್ಕಾರ ಜಾರಿಗೊಳಿಸಿರುವ ಭೂ ಗುತ್ತಿಗೆ ಕಂದಾಯ ಕಾಯ್ದೆ ತಿದ್ದುಪಡಿ ಕೂಡಲೆ ರದ್ದುಗೊಳಿಸುವಂತೆ ಆಗ್ರಹಹಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.