ಶೇ.60 ತಾಯಂದಿರಿಂದ ಮಕ್ಕಳಿಗೆ ಸ್ತನ್ಯಪಾನ: ಜಿಲ್ಲಾಧಿಕಾರಿ ಅಕ್ರಂಪಾಷಇಂದು ಶೇ.60 ತಾಯಂದಿರು ಮಕ್ಕಳಿಗೆ ಸ್ತನ್ಯಪಾನ ಮಾಡಿಸುತ್ತಾರೆ. ಉಳಿದವರು ಮೌಢ್ಯತೆಗೆ ಒಳಗಾಗಿ ಮಗುವಿಗೆ ಹಾಲು ಕುಡಿಸುವುದನ್ನು ನಿಲ್ಲಿಸುತ್ತಾರೆ. ತಮ್ಮ ದೈಹಿಕ ಫಿಟ್ನೆಸ್ ಹಾಳಾಗುತ್ತದೆ ಎಂದು 2-3 ತಿಂಗಳಿಗೆ ಹಾಲು ಕುಡಿಸುವುದನ್ನು ಸ್ಥಗಿತಗೊಳಿಸಿ, ಕೃತಕವಾದ ಹಾಲಿನ ಪುಡಿಗೆ ಮೋರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.