ಅಪರಾಧ ಹೆಚ್ಚುತ್ತಿದ್ದರೂ ಕೈಕಟ್ಟಿ ಕುಳಿತ ಖಾಕಿ?ಇತ್ತೀಚಿನ ದಿನಗಳಲ್ಲಿ ನಂದಿ ಗಿರಿಧಾಮ ಪೊಲೀಸ್ ಠಾಣೆಯ ವ್ಯಾಪ್ತಿಯನ್ನು ಕುಖ್ಯಾತ ಅಪರಾಧಿಗಳು, ಅಪಹರಣಕಾರರು (ಕಿಡ್ನಾಪರ್ಸ್) ತಮ್ಮ ತವರನ್ನಾಗಿ ಮಾಡಿಕೊಂಡಂತೆ ಕಂಡು ಬಂದಿದೆ. ಉದಾಹರಣೆ ಎಂಬಂತೆ ಇತ್ತೀಚೆಗೆ ಇದೇ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಎದುರುಗಡೆ ಇರುವ ಲೋಕೇಶ್ ಹೋಟೆಲ್ ಹತ್ತಿರ ಸೀರೆ ಮಹಿಳಾ ಉದ್ಯಮಿ, ಸೀರೆ ಖರೀದಿ ಮಾಡಲು ವಿಜಯಪುರಕ್ಕೆ ಹೋಗುತ್ತಿದ್ದಾಗ, ಮಹಿಳಾ ಉದ್ಯಮಿಯ ಅಪಹರಣ ಮಾಡಿ, ಠಾಣೆಯ ಬಳಿ ಇರುವ ಎನ್ಎಚ್-44ರಲ್ಲಿ 5 ಲಕ್ಷಕ್ಕೂ ಹೆಚ್ಚು ಹಣ ಕಿತ್ತುಕೊಂಡು, ಚಿತ್ರಹಿಂಸೆ ನೀಡಿ ಬಿಟ್ಟು ಕಳುಹಿಸಲಾಗಿತ್ತು. ಆಗ ಕೆಲವು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.