ಶ್ರೀರಂಗನಾಥಸ್ವಾಮಿಗೆ ಸಡಗರ, ಸಂಭ್ರಮದ ಬಂಗಾರದ ಗರುಡೋತ್ಸವವಿಷ್ಣುವಿನ ವಾಹನ ಬಂಗಾರದ ಗರುಡ ಉತ್ಸವ ಮೂರ್ತಿಯನ್ನು ರಥದ ಮೇಲಿರಿಸಿ, ಅಲಂಕಾರ ಮಾಡಿ ಮಂಗಳ ವಾದ್ಯದೊಂದಿಗೆ ಪಟ್ಟಣದ ರಾಜ ಬೀದಿಯಲ್ಲಿ ದೇವಾಲಯದ ಸಿಬ್ಬಂದಿಯಿಂದ ರಥವನ್ನು ಮೆರವಣಿಗೆ ನಡೆಸಲಾಯಿತು. ಮನೆ ಬಾಗಿಲಿಗೆ ಆಗಮಿಸಿದ ಗರುಡ ಸ್ವಾಮಿಯ ರಥೋತ್ಸವಕ್ಕೆ ಭಕ್ತರು ಹಣ್ಣು, ಕಾಯಿ ಪೂಜೆ ಸಲ್ಲಿಸಿ, ಆರತಿ ಎತ್ತಿ ಪೂಜಿಸಿದರು.