ಕನ್ನಡ ಭಾಷಾಭಿಮಾನಕ್ಕೆ ಕೆಎಸ್‌ಎನ್ ಕೊಡುಗೆ ಅನನ್ಯ: ತೈಲೂರು ವೆಂಕಟಕೃಷ್ಣಮಂಡ್ಯ ಜಿಲ್ಲೆಯ ಸಾಹಿತಿಗಳು, ಕಲಾವಿದರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಮ್ಮದೇ ಆದ ಸಾಹಿತ್ಯ ಕೃಷಿ ಸಾಧನೆಯಿಂದ ಮನೆ ಮಾತಾಗಿದ್ದಾರೆ. ಜಿಲ್ಲೆಯ ಕೀರ್ತಿ, ಗರಿಮೆಯನ್ನು ಹೆಚ್ಚಿಸುವಲ್ಲಿ ಶ್ರಮಿಸಿದ್ದಾರೆ. ಕೆ.ಎಸ್.ನರಸಿಂಹ ಸ್ವಾಮಿ ಅವರು ತಮ್ಮ ನವಿರಾದ ಭಾವನೆಗಳನ್ನು ಕವನಗಳಲ್ಲಿ ತರುವುದರ ಮೂಲಕ ಕಲಾ ರಸಿಕರ, ಪ್ರೇಮಿಗಳ ದೇಶಭಕ್ತರ ಪ್ರೇಮ, ದೇಶಾಭಿಮಾನ ಜಾಗೃತಗೊಳಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.