ಮೂರು ದಿನಗಳೊಳಗೆ ವೇದಿಕೆ ನಿರ್ಮಾಣ ಪೂರ್ಣ: ನರೇಂದ್ರಸ್ವಾಮಿವಿವಿಐಪಿಗೆ ೧೦, ವಿಐಪಿಗೆ ೧೦, ಸಾರ್ವಜನಿಕರಿಗೆ ೫೦, ಸಮಾನಾಂತರ ವೇದಿಕೆ ಬಳಿ ೧೦, ಮಳಿಗೆಗಳ ಬಳಿ ೧೦ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ೧೦ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು, ಶೌಚ ನೀರು ಮತ್ತು ಕೈ ತೊಳೆಯುವ ನೀರು ಜನರು ಓಡಾಡುವ ಸ್ಥಳಗಳ ಬಳಿ ಹರಿಯದಂತೆ ಪ್ರತ್ಯೇಕ ಮಾರ್ಗದಲ್ಲಿ ಹರಿದುಹೋಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.