ಹನುಮ ಜಯಂತಿ: ಆಂಜನೇಯನ ದೇಗುಲಗಳಲ್ಲಿ ವಿಶೇಷ ಪೂಜೆಕಳೆದ 40 ವರ್ಷಗಳಿಂದ ನಿರಂತರವಾಗಿ ಹನುಮ ಜಯಂತಿ ಆಚರಿಸುತ್ತಿರುವ ರೈಲು ನಿಲ್ದಾಣ ಬಳಿಯ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಭಕ್ತಮಂಡಳಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಅಶೋಕ್, ಅರ್ಚಕ ಶಿವರುದ್ರಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ, ಗೋಪಿ, ಮೂರ್ತಿ, ಕುಮಾರ್, ಹೊಸಹಳ್ಳಿ ಶಿವು ಮತ್ತಿತರು ಅನ್ನಸಂತರ್ಪಣೆ ನೆರವೇರಿಸಿದರು.