ವಕ್ಫ್ ಕಾಯ್ದೆ ರದ್ದಿಗೆ ಆಗ್ರಹಿಸಿ ರೈತರು, ವಿವಿಧ ಸಂಘಟನೆಗಳಿಂದ ಪ್ರತಿಭಟನೆರಾಜ್ಯದ ಪ್ರತಿ ಜಿಲ್ಲೆಯಲ್ಲಿ ವಕ್ಫ್ ಬೋರ್ಡ್ ಮನಸೋ ಇಚ್ಛೆ ರೈತರು, ಸಾರ್ವಜನಿಕ ಜಮೀನುಗಳ ಪಹಣಿಗಳಲ್ಲಿ, ವಕ್ಫ್ ಆಸ್ತಿಯೆಂದು ದಾಖಲಿಸಿದ್ದಾರೆ. ಅದೇ ರೀತಿ ದೇವಸ್ಥಾನ, ಸಂಘ ಸಂಸ್ಥೆ, ಸರ್ಕಾರಿ ಶಾಲೆ, ಕೆರೆಕುಂಟೆ, ಹಿಂದೂ ಸ್ಮಶಾನ ಭೂಮಿ, ಪುರಾತನ ಸ್ಮಾರಕ, ಮಠ ಮಂದಿರಗಳ ಜಮೀನು ಸೇರಿದಂತೆ ಸಾರ್ವಜನಿಕ ಆಸ್ತಿಗಳನ್ನು ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಇಂತಹ ಆಸ್ತಿಗಳು ವಕ್ಫ್ ಆಸ್ತಿಗಳೆಂದು ನಮೂದಿಸುತ್ತಿದ್ದಾರೆ.