ದೇಶದ ರೈತರಿಗೆ ನಿರಂತರ ಮೋಸ: ಹಾಡ್ಯ ರಮೇಶ್ ರಾಜುಅಭಿವೃದ್ಧಿಯ ವೇಗದಲ್ಲಿ ರೈತ ಹಿಂದುಳಿದಂತೆ ತೋರುತ್ತಿದ್ದಾನೆ. ರಾಷ್ಟ್ರದ ಅನೇಕ ಸಂಸ್ಥೆಗಳು ಈ ಅಸಂಗತತೆಯನ್ನು ಸರಿಪಡಿಸಲು ಪ್ರಯತ್ನಿಸುತ್ತಿವೆ. ಆದರೆ, ಅವುಗಳಲ್ಲಿ ಹೆಚ್ಚಿನವು ಕೆಲವು ವ್ಯಕ್ತಿಗಳ ಮುಖವಾಣಿಗಳಾಗಿವೆ. ಅಥವಾ ರಾಜಕೀಯ ಪಕ್ಷಗಳ ಸಂಬಂಧ ಹೊಂದಿವೆ. ಇವು ರೈತರನ್ನು ತಮ್ಮ ಸ್ವಾರ್ಥ ಉದ್ದೇಶಗಳನ್ನು ಪೂರೈಸಲು ಹಾಗೂ ಉನ್ನತ ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಬಳಸುತ್ತಿವೆ.