ಅಂಗನವಾಡಿ ಕೇಂದ್ರಕ್ಕೆ ಮೂಲ ಸೌಲಭ್ಯ ಕಲ್ಪಿಸದ ಗ್ರಾಪಂ ಅಧಿಕಾರಿಗಳು; ಮಕ್ಕಳ ಪೋಷಕರ ಆಕ್ರೋಶಅಂಗನವಾಡಿ, ಶಾಲೆಗಳಿಗೆ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಇವುಗಳನ್ನು ಒದಗಿಸಿಕೊಡಬೇಕು. ಆದರೆ, ಕನಗನಮರಡಿ ಗ್ರಾಪಂ ಅಧಿಕಾರಿಗಳು, ಜನಪ್ರತಿನಿಧಿಗಳು ಚಿಕ್ಕಮರಳಿ ಗ್ರಾಮದ ಮೊದಲ ಅಂಗನವಾಡಿಗೆ ಕಳೆದ ಒಂದು ವರ್ಷದಿಂದಲೂ ಕುಡಿಯುವ ನೀರಿನ ಸಂಪರ್ಕ ಕಲ್ಪಿಸದ ಕಾರಣ ಅಂಗನವಾಡಿ ಸಹಾಯಕಿಯರು, ಮಕ್ಕಳು ಕುಡಿಯುವ ನೀರಿಗಾಗಿ ಬೇರೆಡೆಯಿಂದ ತರುವಂಥ ಪರಿಸ್ಥಿತಿ ಎದುರಾಗಿದೆ.