ಸ್ವಾಮೀಜಿ ವಿರುದ್ಧುದ ಎಫ್‌ಐಆರ್ ವಾಪಸ್‌ಗೆ ಆಗ್ರಹಸ್ವಾಮೀಜಿ ಅವರಿಗೆ ಈಗಾಗಲೇ ವಯಸ್ಸಾಗಿದ್ದು, ಹಿರಿಯರಾಗಿರುವ ಅವರ ಬಾಯ್ತಪ್ಪಿನಿಂದ ಹೇಳಿಕೆ ನೀಡಿದ್ದಾರೆ. ತಮ್ಮ ಹೇಳಿಕೆ ತಪ್ಪಾಗಿದೆಯೆಂದು ಕ್ಷಮೆಯನ್ನೂ ಕೇಳಿದ್ದಾರೆ. ಅದನ್ನು ಪರಿಗಣಿಸಿ, ಸರ್ಕಾರ ಎಫ್‌ಐಆರ್‌ನ್ನು ಹಿಂಪಡೆಯಬೇಕು. ಒಂದು ವೇಳೆ ಸರ್ಕಾರ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದರೆ ಒಕ್ಕಲಿಗ ಸಮುದಾಯದ ಸೇರಿದಂತೆ ಎಲ್ಲಾ ಸಂಘ ಸಂಸ್ಥೆಗಳು ಜೊತೆಗೂಡಿ ಹೋರಾಟಕ್ಕಿಳಿಯಲಾಗುವುದು.