ಧಾರಾಕಾರ ಮಳೆಗೆ ಒಡೆದ ಚಿಕ್ಕದೇವರಾಯ ನಾಲೆ ಏರಿ, ಅಪಾರ ಪ್ರಮಾಣದ ಬೆಳೆ ನಾಶಚಿಕ್ಕದೇವರಾಜ ಒಡೆಯರ್ (ಸಿಡಿಎಸ್) ಕಾಲುವೆ ಏರಿ ಒಡೆದ ಪರಿಣಾಮ ಈ ನಾಲೆ ವ್ಯಾಪ್ತಿಯಲ್ಲಿ ಬರುವ ಕೂಡಲಕುಪ್ಪೆ, ದರಸಗುಪ್ಪೆ, ಕೆನ್ನಾಳು, ಬಾಬುರಾಯನಕೊಪ್ಪಲು, ಕಿರಂಗೂರಿನ ಗ್ರಾಮದ ಕೃಷಿಕರ ಜಮೀನುಗಳಿಗೆ ನೀರು ನುಗ್ಗಿದ್ದು, ಕಬ್ಬು ಬೆಳೆ, ಭತ್ತ, ತೆಂಗು, ಅಡಿಕೆ, ಬಾಳೆ ಅಧಿಕವಾಗಿ ನೀರು ನುಗ್ಗಿ ಸಂಪೂರ್ಣವಾಗಿ ನಾಶವಾಗಿದೆ.