ಕರಿಘಟ್ಟ ಬೆಟ್ಟದಲ್ಲಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರಮದಾನಸರ್ಕಾರಿ ಪದವಿ ಕಾಲೇಜಿನ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶ್ರಮದಾನ ನಡೆಸಿ ಕರಿಘಟ್ಟ ಬೆಟ್ಟದ ವ್ಯೂ ಪಾಯಿಂಟ್ ಗುಡ್ಡದಲ್ಲಿ ನೆಟ್ಟಿರುವ ಸುಮಾರು 300ಕ್ಕೂ ಹೆಚ್ಚು ಆಲ, ಅರಳಿ ಬೇವು, ಹಿಪ್ಪೇ, ಹೊಂಗೆ, ಗೋಣಿ, ಬೇಲಾ, ಬೆಟ್ಟದ ನಿಲ್ಲಿ ಗಿಡ, ತಪಸಿ, ನೇರಳೆ ಕಾಡು ಮಾವು ಸೇರಿದಂತೆ ಇತರೆ ಗಿಡಗಳ ಸುತ್ತ ಬೆಳೆದಿದ್ದ ಒಣ ಹುಲ್ಲು ತೆಗೆದು ಪಾತಿ ಮಾಡಿದರು.