ಭಾರತೀ ಸಂಯುಕ್ತ ಪದವಿ ಪೂರ್ವ (ಎಕ್ಸಲೆನ್ಸ್) ಕಾಲೇಜು ಶೇ.95 ರಷ್ಟು ಫಲಿತಾಂಶದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಾರತೀ ಸಂಯುಕ್ತ ಪದವಿ ಪೂರ್ವ (ಎಕ್ಸಲೆನ್ಸ್) ಕಾಲೇಜು ಶೇ.95 ರಷ್ಟು ಫಲಿತಾಂಶ ಲಭಿಸಿದೆ. ವಿಜ್ಞಾನ ವಿಭಾಗದಲ್ಲಿ 34 ಅತ್ಯುನ್ನತ ಶ್ರೇಣಿ, 58 ಪ್ರಥಮ, ಒಬ್ಬ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ವಾಣಿಜ್ಯ ವಿಭಾಗದಲ್ಲಿ 4 ಅತ್ಯುನ್ನತ ಶ್ರೇಣಿ, 12 ಪ್ರಥಮ, ಇಬ್ಬರು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.