ಸಮ್ಮೇಳನ ಜವಾಬ್ದಾರಿ ಸಿಕ್ಕಿದ್ದು ನನ್ನ ಸೌಭಾಗ್ಯ, ಕೊನೆ ಉಸಿರು ಇರುವವರೆಗೂ ಮರೆಯಲ್ಲ: ಚಲುವರಾಯಸ್ವಾಮಿಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಸಾಹಿತಿಗಳು, ಪರಿಷತ್ತಿನ ಪದಾಧಿಕಾರಿಗಳು, ಶಾಸಕರು, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಸಂಘಟನೆಗಳು, ಸಾರ್ವಜನಿಕರು ಕಾರಣಕರ್ತರು. ರಾಜ್ಯದ ಅನೇಕ ಜಿಲ್ಲೆಗಳಿಗೆ ಹೋದಾಗ ಹಲವು ಸಾಹಿತಿಗಳು ನನ್ನ ಬಳಿ ಬಂದು ಮುಟ್ಟಿ ಮಾತನಾಡಿಸಿ ಸಾಹಿತ್ಯ ಸಮ್ಮೇಳನದ ಬಗ್ಗೆ ನಾಲ್ಕು ಮಾತು ಹೇಳುವ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ.