ಇಂದಿನಿಂದ ಮೇಲುಕೋಟೆ ಕಾರ್ತಿಕ ಜಾತ್ರೆ ವಜ್ರಖಚಿತ ರಾಜಮುಡಿ ಬ್ರಹ್ಮೋತ್ಸವಚೆಲುವ ದೈವೀವನದ ಮಧ್ಯೆ ಇರುವ ವೇದ ಪುಷ್ಕರಣಿ, ಶ್ರೀರಾಮ ಸೀತೆಗಾಗಿ ಬಾಣಬಿಟ್ಟು ನೀರುಕ್ಕಿಸಿದ ಹೆಬ್ಬಂಡೆಗಳ ನಡುವಿನ ಧನುಷ್ಕೋಟಿ, ಬೆಟ್ಟಗುಡ್ಡಳಿಂದ ಹರಿಯುವ ಯಾದವ ತೀರ್ಥ, ಬೆಟ್ಟಗಳ ಮಧ್ಯೆ ಇರುವ ದರ್ಭತೀರ್ಥ, ಪಲಾಶತೀರ್ಥ, ಪದ್ಮತೀರ್ಥ, ಬಾಲಕರ ಶಾಲೆ ಹಿಂಭಾಗವಿರುವ ನರಸಿಂಹ ತೀರ್ಥ, ಮೋಕ್ಷ ಕರುಣಿಸುವ ನಾರಾಯಣ ತೀರ್ಥ ಹೀಗೆ ಎಂಟು ಪವಿತ್ರ ತೀರ್ಥ ಕೊಳಗಳು ಮೇಲುಕೋಟೆಯ ಗಿರಿ ಶಿಖರಗಳ ಮಧ್ಯೆ ನಿರ್ಮಾಣವಾಗಿವೆ. ವೈಕುಂಠ ಗಂಗೆಯಂತೂ ಹೆಬ್ಬಂಡೆಗಳ ಮಧ್ಯೆ ಹರಿಯುತ್ತಿದ್ದು ನಯನ ಮನೋಹರ ಪರಿಸರದಲ್ಲಿದೆ.