ಬಾಗಲಕೋಟೆ ಜಿಲ್ಲೆಯ ಪರಮರಾಮಾರೂಢ ಸ್ವಾಮೀಜಿಗೆ ಜೀವ ಬೆದರಿಕೆ..!ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಪದವಿ ಬಳಸಿ ಶ್ರೀಗಳನ್ನು ವಂಚಿಸಿ ಜೈಲು ಸೇರಿದ್ದ ಪ್ರಕಾಶ್ ಮುದೋಳ ಬೇಲ್ ಮೂಲಕ ಹೊರಕ್ಕೆ ಬಂದಿದ್ದು, ಜೊತೆಗೆ ಅನೇಕ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈಗ ಸ್ವಾಮೀಜಿ ಅವರಿಗೆ ಬಾಗಲಕೋಟೆ ಮಠ ಬಿಟ್ಟು ಬೇರೆಕಡೆ ತೆರಳಲು ಜೀವ ಭಯ ಕಾಡುತ್ತಿದೆ. ಅವರಿಂದ ಅಥವಾ ಬೇರೆಯವರಿಂದ ತೊಂದರೆಯಾಗಬಹುದು ಎಂದು ಬೇರೆ ಮಠಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ.