ಹಂಚಿಕೆ ಮಾಡಿದ್ದ ನಿವೇಶನ ಬೇರೆಯವರ ಹೆಸರಿಗೆ ಖಾತೆ: ನಿವಾಸಿಗಳ ಪ್ರತಿಭಟನೆ1995ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಶಾಸಕರಾಗಿದ್ದ ವೇಳೆ ಚಂದ್ರೆ ಬಡಾವಣೆಯಲ್ಲಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಿದ್ದರು. ಈ ವೇಳೆ ವಿರಾಜ್, ರೂಪಶ್ರೀ, ಸರ್ಧಾರ್, ನೋಕಿಫರ್ಮಿನ್, ಆಶೀಫ್ ಹಾಗೂ ಹೇಮಲತಾ ಅವರಿಗೂ ಸಹ ನಿವೇಶನ ಹಂಚಿಕೆ ಮಾಡಿದ್ದಾರೆ. ಈ ನಿವೇಶನಗಳಿಗೆ ಪುರಸಭೆಯಿಂದ ಇ-ಸ್ವತ್ತು ಸಹ ಮಾಡಿದ್ದಾರೆ.